Leviticus 18:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಿಂದೆ ನೀವು ಈಜಿಪ್ಟಿನಲ್ಲಿ ವಾಸಿಸಿದಿರಿ. ಈಜಿಪ್ಟಿನ ಜನರು ಆಚರಿಸುವ ಆಚಾರಗಳನ್ನು ನೀವು ಅನುಸರಿಸಬಾರದು. ಆ ದೇಶದಲ್ಲಿ ಮಾಡುತ್ತಿದ್ದ ಕಾರ್ಯಗಳನ್ನು ನೀವು ಮಾಡಬಾರದು. ನಾನು ನಿಮ್ಮನ್ನು ಕಾನಾನಿಗೆ ನಡೆಸುತ್ತಿದ್ದೇನೆ. ಆ ದೇಶದಲ್ಲಿ ಮಾಡುವ ಕಾರ್ಯಗಳನ್ನು ನೀವು ಮಾಡಕೂಡದು. ಅವರ ಸಂಪ್ರದಾಯಗಳನ್ನು ಅನುಸರಿಸಬೇಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ವಾಸವಾಗಿದ್ದ ಐಗುಪ್ತ ದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್ ದೇಶದ ಆಚರಣೆಗಳನ್ನು ನೀವು ಅನುಸರಿಸಬಾರದು, ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು.
Kannada BSI Bible 2016
ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್‌ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ವಾಸವಾಗಿದ್ದ ಐಗುಪ್ತದೇಶದ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಬರಮಾಡುವ ಕಾನಾನ್‍ದೇಶದ ಆಚರಣೆಗಳನ್ನೂ ನೀವು ಅನುಸರಿಸಬಾರದು; ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಬಾರದು.
Kannada Bible (KNCL) BSI 2016
ನೀವು ವಾಸವಾಗಿದ್ದ ಈಜಿಪ್ಟಿನ ಆಚಾರಗಳನ್ನು ಅನುಸರಿಸಬಾರದು; ನಾನು ನಿಮ್ಮನ್ನು ಕರೆದೊಯ್ಯುತ್ತಿರುವ ಕಾನಾನ್ ನಾಡಿನ ಆಚರಣೆಗಳನ್ನು ಕೂಡ ನೀವು ಅನುಸರಿಸಬಾರದು. ಅವರಲ್ಲಿರುವ ನಿಯಮಗಳಿಗೆ ನೀವು ಒಳಗಾಗಕೂಡದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ವಾಸವಾಗಿದ್ದ ಈಜಿಪ್ಟ್ ದೇಶದ ಆಚಾರಗಳನ್ನು ಅನುಸರಿಸಬಾರದು. ನಿಮ್ಮನ್ನು ಸೇರಿಸಲಿರುವ ಕಾನಾನ್ ದೇಶದವರ ಆಚಾರಗಳನ್ನು ನೀವು ಮಾಡಬಾರದು. ಇಲ್ಲವೆ ನೀವು ಅವರ ಪದ್ಧತಿಗಳನುಸಾರ ನಡೆಯಬಾರದು.