Leviticus 20:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ನೀವು ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು. ಅವಳಿಗೆ ಮತ್ತು ಅದಕ್ಕೆ ಮರಣ ಶಿಕ್ಷೆಯಾಗಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವ ಸ್ತ್ರೀಯಾದರೂ ಪಶುವಿನಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನು ಮತ್ತು ಪಶುವನ್ನು ಕೊಲ್ಲಿಸಬೇಕು; ಅವಳಿಗೂ ಹಾಗೂ ಅದಕ್ಕೂ ಮರಣವೇ ನಿಯಮ; ಆ ಮರಣ ಶಿಕ್ಷೆಗೆ ತಾವೇ ಕಾರಣರು.
Kannada BSI Bible 2016
ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವದಕ್ಕಾಗಿ ಮಲಗಿಕೊಂಡರೆ ನೀವು ಆ ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು; ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು; ಅವರ ರಕ್ತವು ಅವರ ಮೇಲೆ ಇರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವ ಸ್ತ್ರೀಯಾದರೂ ಪಶುವಿನಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನೂ ಪಶುವನ್ನೂ ಕೊಲ್ಲಿಸಬೇಕು; ಅವಳಿಗೂ ಅದಕ್ಕೂ ಮರಣವೇ ವಿಧಿ; ಆ ಮರಣಶಿಕ್ಷೆಗೆ ತಾವೇ ಕಾರಣರು.
Kannada Bible (KNCL) BSI 2016
ಯಾವ ಸ್ತ್ರೀಯಾದರೂ ಪ್ರಾಣಿಯಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನೂ ಪ್ರಾಣಿಯನ್ನು ಕೊಲ್ಲಿಸಬೇಕು; ಅವಳಿಗೂ ಅದಕ್ಕೂ ಮರಣವೇ ವಿಧಿ. ಆ ಮರಣ ಶಿಕ್ಷೆಗೆ ತಾವೇ ಕಾರಣರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವುದಕ್ಕಾಗಿ ಮಲಗಿಕೊಂಡರೆ, ನೀವು ಆ ಸ್ತ್ರೀಯನ್ನೂ, ಆ ಪಶುವನ್ನೂ ಕೊಲ್ಲಬೇಕು. ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು. ಅವರ ಪಾಪವು ಅವರ ಮೇಲೆ ಇರುವುದು.