Leviticus 20:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು. ನಿಮ್ಮ ದೇಶದಲ್ಲಿರುವ ಒಬ್ಬನು ತನ್ನ ಮಕ್ಕಳಲ್ಲಿ ಒಬ್ಬನನ್ನು ಸುಳ್ಳು ದೇವರಾದ ಮೊಲೆಕನಿಗೆ ಅರ್ಪಿಸಿದರೆ ಅವನನ್ನು ಕೊಲ್ಲಬೇಕು. ಅವನು ಸ್ವದೇಶಸ್ಥನಾದರೂ ಇಸ್ರೇಲರಲ್ಲಿ ವಾಸಿಸುವ ಪರದೇಶಸ್ಥನಾದರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಪರದೇಶದವರಲ್ಲಾಗಲಿ ಯಾವನಾದರೂ ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟರೆ, ಅವನಿಗೆ ಮರಣಶಿಕ್ಷೆಯಾಗಬೇಕು; ದೇಶದ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
Kannada BSI Bible 2016
ನೀನು ತಿರಿಗಿ ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್‌ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಇಸ್ರಾಯೇಲ್ಯರಿಗೆ ಹೀಗೆ ಹೀಗೆ ಆಜ್ಞಾಪಿಸಬೇಕು - ಇಸ್ರಾಯೇಲ್ಯರಲ್ಲಾಗಲಿ ಅವರ ನಡುವೆ ಇಳುಕೊಂಡಿರುವ ಪರದೇಶದವರಲ್ಲಾಗಲಿ ಯಾವನಾದರೂ ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟರೆ ಅವನಿಗೆ ಮರಣಶಿಕ್ಷೆಯಾಗಬೇಕು; ದೇಶದ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
Kannada Bible (KNCL) BSI 2016
ಇಸ್ರಯೇಲರಲ್ಲೇ ಆಗಲಿ, ಅವರ ಮಧ್ಯೆ ವಾಸಿಸುವ ಅನ್ಯದೇಶೀಯರಲ್ಲೇ ಆಗಲಿ ಯಾವನಾದರು ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿದರೆ ಅವನಿಗೆ ಮರಣ ಶಿಕ್ಷೆಯಾಗಬೇಕು; ನಾಡಿನ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು: ‘ಇಸ್ರಾಯೇಲರಲ್ಲಿಯಾಗಲಿ, ಇಸ್ರಾಯೇಲಿನಲ್ಲಿ ಪ್ರವಾಸಿಯಾದ ಪರಕೀಯರಲ್ಲಿಯಾಗಲಿ ಯಾವನಾದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ, ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು. ದೇಶದ ಜನರು ಅವನಿಗೆ ಕಲ್ಲೆಸೆಯಬೇಕು.