Leviticus 20:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಅವನಿಗೂ ಅವನ ಕುಟುಂಬಕ್ಕೂ ವಿರುದ್ಧನಾಗಿರುವೆನು; ನಾನು ಅವನನ್ನು ಅವನ ಜನರಿಂದ ಬೇರ್ಪಡಿಸುವೆನು. ಮೊಲೆಕನೊಡನೆ ಸೂಳೆತನ ಮಾಡುವ ಅವನನ್ನೂ ಅವನ ಹಿಂಬಾಲಕರನ್ನೂ ಅವರ ಜನರಿಂದ ಬೇರ್ಪಡಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನಾನು ಆ ಮನುಷ್ಯನಿಗೂ ಮತ್ತು ಅವನ ಕುಟುಂಬದವರಿಗೂ ವಿಮುಖನಾಗಿ ಅವನನ್ನು ಮಾತ್ರವಲ್ಲದೆ, ಅವನನ್ನು ಹೊಂದಿಕೊಂಡು ದೇವದ್ರೋಹಿಗಳಾಗಿ ಮೋಲೆಕನಿಗೆ ಸೇವೆ ಮಾಡಿದವರೆಲ್ಲರನ್ನು ಕುಲದಿಂದ ತೆಗೆದುಹಾಕುವೆನು.
Kannada BSI Bible 2016
ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನಂತೂ ಆ ಮನುಷ್ಯನಿಗೂ ಅವನ ಕುಟುಂಬದವರಿಗೂ ವಿಮುಖನಾಗಿ ಅವನನ್ನು ಮಾತ್ರವಲ್ಲದೆ ಅವನನ್ನು ಹೊಂದಿಕೊಂಡು ದೇವದ್ರೋಹಿಗಳಾಗಿ ಮೋಲೆಕನಿಗೆ ಸೇವೆಮಾಡಿದವರೆಲ್ಲರನ್ನೂ ಕುಲದಿಂದ ತೆಗೆದುಹಾಕುವೆನು.
Kannada Bible (KNCL) BSI 2016
ನಾನು ಆ ವ್ಯಕ್ತಿಗೂ ಅವನ ಕುಟುಂಬದವರಿಗೂ ವಿಮುಖನಾಗುವೆನು; ಅವನನ್ನು ಮಾತ್ರವಲ್ಲ, ಅವನನ್ನು ಹೊಂದಿಕೊಂಡು ದೇವದ್ರೋಹಿಗಳಾಗಿ ಮೋಲೆಕ ದೇವತೆಗೆ ಶರಣಾದವರೆಲ್ಲರನ್ನು ತಮ್ಮ ಜನದಿಂದ ತೆಗೆದುಹಾಕುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು ಆ ಮನುಷ್ಯನಿಗೂ, ಅವನ ಕುಟುಂಬಕ್ಕೂ ವಿರೋಧವಾಗಿಯೂ, ವಿಮುಖವಾಗಿಯೂ ಇರುವೆನು. ಮೋಲೆಕನನ್ನು ಪೂಜೆ ಮಾಡಿದ್ದಕ್ಕಾಗಿ ಅವನನ್ನೂ, ದೇವದ್ರೋಹಿಗಳಾಗಿ ಅವನನ್ನು ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.