Leviticus 20:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗುವ ಯಾವುದೇ ವ್ಯಕ್ತಿಯಾದರೂ ಸರಿಯೇ ಅವನಿಗೆ ನಾನು ವಿರುದ್ಧವಾಗಿರುವೆನು. ಆ ವ್ಯಕ್ತಿ ನನಗೆ ಅಪನಂಬಿಗಸ್ತನಾಗಿದ್ದಾನೆ. ಆದ್ದರಿಂದ ನಾನು ಅವನನ್ನು ಅವನ ಕುಲದಿಂದ ತೆಗೆದುಹಾಕುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಯಾವನಾದರೂ ಸತ್ತವರಲ್ಲಿ ವಿಚಾರಿಸುವವರ ಅಥವಾ ಬೇತಾಳಿಕರ ಬಳಿಗೆ ಹೋಗಿ ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ, ನಾನು ಆ ಮನುಷ್ಯನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.
Kannada BSI Bible 2016
ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ಸತ್ತವರಲ್ಲಿ ವಿಚಾರಿಸುವವರ ಅಥವಾ ಬೇತಾಳಿಕರ ಬಳಿಗೆ ಹೋಗಿ ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ ನಾನು ಆ ಮನುಷ್ಯನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.
Kannada Bible (KNCL) BSI 2016
“ಯಾರಾದರು ಭೂತ-ಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆಯನ್ನು ಕೇಳಿ, ದೇವದ್ರೋಹಿಯಾದರೆ ನಾನು ಅಂಥ ವ್ಯಕ್ತಿಗೆ ವಿಮುಖನಾಗಿ ಅವನನ್ನು ತನ್ನ ಜನತೆಯಿಂದ ತೆಗೆದುಹಾಕುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಇದಲ್ಲದೆ ಮಾಟಗಾರರನ್ನು ಮತ್ತು ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ ನಾನು ಅಂಥ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.