Leviticus 22:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಒಬ್ಬನು ತಿಳಿಯದೆ ನೈವೇದ್ಯ ಪದಾರ್ಥವನ್ನು ತಿಂದರೆ ಅವನು ಆ ಪದಾರ್ಥವನ್ನೂ ಪದಾರ್ಥದ ಬೆಲೆಯ ಐದನೆಯ ಒಂದಂಶವನ್ನೂ ಅದಕ್ಕೆ ಸೇರಿಸಿ ಯಾಜಕನಿಗೆ ಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅದನ್ನು ಮತ್ತು ಅದರ ಐದನೆಯ ಭಾಗವನ್ನು ಯಾಜಕನಿಗೆ ತಂದುಕೊಡಬೇಕು.
Kannada BSI Bible 2016
ಇದಲ್ಲದೆ ಒಬ್ಬನು ತಪ್ಪಾಗಿ ಪರಿಶುದ್ಧ ವಾದದ್ದನ್ನು ತಿಂದರೆ ಅವನು ಅದರ ಐದನೇ ಪಾಲನ್ನು ಕೂಡಿಸಿ ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ತಿಳಿಯದೆ ನೈವೇದ್ಯವಾದದ್ದನ್ನು ಊಟಮಾಡಿದರೆ ಅಷ್ಟನ್ನೂ ಅದರ ಐದನೆಯ ಭಾಗವನ್ನೂ ಯಾಜಕನಿಗೆ ತೆರಬೇಕು.
Kannada Bible (KNCL) BSI 2016
“ಯಾಜಕನಲ್ಲದವನು ತಿಳಿಯದೆ ನೈವೇದ್ಯವಾದುದನ್ನು ಊಟಮಾಡಿದರೆ ಅಷ್ಟನ್ನೂ ಹಾಗು ಅದರ ಐದನೆಯ ಒಂದು ಭಾಗವನ್ನೂ ಯಾಜಕನಿಗೆ ತೆರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.