Leviticus 22:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಒಬ್ಬನು ಸಮಾಧಾನಯಜ್ಞವನ್ನು ಹರಕೆಯಾಗಿ ಅಥವಾ ಕಾಣಿಕೆಯಾಗಿ ಅರ್ಪಿಸುವಾಗ ಹೋರಿಯನ್ನಾಗಲಿ ಟಗರನ್ನಾಗಲಿ ಅರ್ಪಿಸಬೇಕು; ಅದು ಅಂಗದೋಷವಿಲ್ಲದ್ದಾಗಿರಬೇಕು; ಆರೋಗ್ಯವುಳ್ಳದ್ದಾಗಿರಬೇಕು. ಆಗ ಅದು ಸ್ವೀಕೃತವಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ದನವನ್ನು ಅಥವಾ ಹಿಂಡಿನ ಆಡು ಇಲ್ಲವೇ ಕುರಿಗಳನ್ನು ತಂದರೆ ಅವು ಯೆಹೋವನಿಗೆ ಸಮರ್ಪಕವಾಗುವುದಕ್ಕಾಗಿ ಅದು ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
Kannada BSI Bible 2016
ತನ್ನ ಪ್ರಮಾಣವನ್ನು ಪೂರೈಸುವ ಹಾಗೆ ಯಾವನಾದರೂ ಸಮಾಧಾನದ ಬಲಿಗಳ ಯಜ್ಞ ಸಮರ್ಪಣೆಯನ್ನಾಗಲಿ ಪಶುಗಳನ್ನಾಗಲಿ ಕುರಿಗಳ ನ್ನಾಗಲಿ ಉಚಿತವಾದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸುವದಾದರೆ ಅದು ಅಂಗೀಕಾರಕ್ಕೆ ಪರಿಪೂರ್ಣ ವುಳ್ಳದ್ದಾಗಿರಬೇಕು; ಅದರೊಳಗೆ ಯಾವ ದೋಷವು ಇರಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿಯಾಗಲಿ ಕಾಣಿಕೆಯಾಗಿಯಾಗಲಿ ದನವನ್ನು ಅಥವಾ ಆಡುಕುರಿಗಳನ್ನು ತಂದರೆ ಅವು ಸಮರ್ಪಕವಾಗುವದಕ್ಕೆ ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
Kannada Bible (KNCL) BSI 2016
ಹರಕೆಯಾಗಿ ಅಥವಾ ಕಾಣಿಕೆಯಾಗಿ ಯಾರಾದರು ಶಾಂತಿಸಮಾಧಾನದ ಬಲಿಯನ್ನರ್ಪಿಸಲು ಆಶಿಸಿದರೆ ಅವರು ತರುವ ದನಕರುಗಳು, ಆಡು ಕುರಿಗಳು ಕಳಂಕರಹಿತವಾಗಿರಬೇಕು. ಯಾವುದಾದರೂ ಕುಂದುಕೊರತೆ ಇದ್ದರೆ ಆ ಬಲಿದಾನ ಸ್ವೀಕೃತವಾಗುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಮ್ಮ ಪ್ರಮಾಣವನ್ನು ಪೂರೈಸುವ ಹಾಗೆ ಯಾರಾದರೂ ಸಮಾಧಾನದ ಬಲಿಯನ್ನಾಗಲಿ, ಪಶುಗಳನ್ನಾಗಲಿ, ಕುರಿಗಳನ್ನಾಗಲಿ ಉಚಿತವಾದ ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಾದರೆ, ಅದು ಅಂಗೀಕಾರಕ್ಕೆ ಪರಿಪೂರ್ಣವುಳ್ಳದ್ದಾಗಿರಬೇಕು. ಅದರೊಳಗೆ ಯಾವ ದೋಷವೂ ಕಳಂಕವೂ ಇರಬಾರದು.

Recommended Reading