Leviticus 22:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಪರದೇಶಸ್ಥರಿಂದ ಯೆಹೋವನಿಗೆ ಬಲಿಪಶುಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಆ ಪಶುಗಳಿಗೆ ಒಂದುವೇಳೆ ಪೆಟ್ಟಾಗಿರಬಹುದು. ಅವುಗಳಲ್ಲಿ ಏನಾದರೂ ದೋಷವಿರಬಹುದು. ಅವುಗಳು ಸಮರ್ಪಕವಾಗುವುದಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’” ಅಂದನು.
Kannada BSI Bible 2016
ಇದಲ್ಲದೆ ಪರಕೀಯನ ಕೈಯೊಳಗಿಂದಲೂ ಅಂಥವುಗಳಲ್ಲಿ ಯಾವದನ್ನಾದರೂ ನಿಮ್ಮ ದೇವರಿಗೆ ರೊಟ್ಟಿಯಾಗಿ ಅರ್ಪಿಸಬಾರದು. ಅವರ ನೀತಿಭ್ರಷ್ಠತೆಯೂ ದೋಷ ಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರ ವಾಗಿ ಅಂಗೀಕಾರವಾಗುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯದೇಶದವನಿಂದ ತೆಗೆದುಕೊಂಡು ಅಂಥ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದದ್ದಲ್ಲ; ಆದಕಾರಣ ಸಮರ್ಪಕವಾಗುವದಿಲ್ಲ.
Kannada Bible (KNCL) BSI 2016
ಅನ್ಯದೇಶದವನಿಂದ ತೆಗೆದುಕೊಂಡ ಅಂಥ ಪ್ರಾಣಿಯನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು. ಅದು ಕುಂದುಳ್ಳದ್ದು, ಕಳಂಕಿತವಾದದ್ದು. ಆದಕಾರಣ ಸ್ವೀಕೃತವಾಗದು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’ ”