Leviticus 22:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಕರುವಾಗಲಿ ಕುರಿಮರಿಯಾಗಲಿ ಅಥವಾ ಆಡಾಗಲಿ ಹುಟ್ಟಿದ ಬಳಿಕ ತನ್ನ ತಾಯಿಯೊಂದಿಗೆ ಏಳು ದಿನಗಳವರೆಗೆ ಇರಲೇಬೇಕು. ಎಂಟನೆಯ ದಿನದಲ್ಲಿ ಮತ್ತು ಅದರ ನಂತರ, ಆ ಪಶುವು ಸರ್ವಾಂಗಹೋಮಕ್ಕೆ ಯೋಗ್ಯವಾಗಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು.
Kannada BSI Bible 2016
ಹೋರಿಯನ್ನಾಗಲಿ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ ಏಳು ದಿವಸಗಳ ವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಕರ್ತನಿಗೆ ದಹನಬಲಿಯಾಗಿ ಅಂಗೀ ಕಾರವಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರುವಾಗಲಿ ಕುರಿಮರಿಯಾಗಲಿ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿವಸ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿವಸ ಮೊದಲುಗೊಂಡು ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅಂಗೀಕಾರವಾಗುವದು.
Kannada Bible (KNCL) BSI 2016
“ಕರುವಾಗಲಿ, ಕುರಿಮರಿಯಾಗಲಿ, ಆಡುಮರಿಯಾಗಲಿ ಹುಟ್ಟಿ ಏಳು ದಿವಸ ಆದ ಬಳಿಕ ಅದನ್ನು ಸರ್ವೇಶ್ವರನಿಗೆ ಹೋಮವಾಗಿ ಸಮರ್ಪಿಸಿದರೆ ಅಂಗೀಕೃತವಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಹೋರಿಯನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ, ಏಳು ದಿವಸಗಳವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸಿದರೆ ಅಂಗೀಕಾರವಾಗುವುದು.