Leviticus 22:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯಾಜಕನು ಸತ್ತ ಪ್ರಾಣಿಯನ್ನಾಗಲಿ ಕ್ರೂರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನಾಗಲಿ ತಿನ್ನಬಾರದು. ಅವನು ಅದನ್ನು ತಿಂದರೆ ಅಶುದ್ಧನಾಗುವನು. ನಾನೇ ಯೆಹೋವನು!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.
Kannada BSI Bible 2016
ತನ್ನನ್ನು ಹೊಲೆಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನಾಗಲಿ ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟದ್ದನ್ನಾಗಲಿ ತಿನ್ನಬಾರದು; ನಾನೇ ಕರ್ತನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ಅವನ ಜೀವನವಷ್ಟೆ. ತಾನಾಗಿ ಸತ್ತುಬಿದ್ದದ್ದನ್ನಾಗಲಿ ಕಾಡುಮೃಗದಿಂದ ಕೊಲ್ಲಲ್ಪಟ್ಟದ್ದನ್ನಾಗಲಿ ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.
Kannada Bible (KNCL) BSI 2016
ತಾನಾಗಿ ಸತ್ತುಬಿದ್ದದ್ದನ್ನು ಅಥವಾ ಕಾಡುಮೃಗ ಕೊಂದದ್ದನ್ನು ಅವನು ತಿಂದು ಅಪವಿತ್ರ ಮಾಡಿಕೊಳ್ಳಬಾರದು. ನಾನು ಸರ್ವೇಶ್ವರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನನ್ನು ಅಶುದ್ಧಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವುದನ್ನಾಗಲಿ ಇಲ್ಲವೆ ಕಾಡುಮೃಗಗಳಿಂದ ಕೊಂದದ್ದನ್ನಾಗಲಿ ತಿನ್ನಬಾರದು. ನಾನೇ ಯೆಹೋವ ದೇವರು.