Leviticus 24:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲಿನ ಒಬ್ಬ ಸ್ತ್ರೀಗೆ ಒಬ್ಬ ಮಗನಿದ್ದನು. ಅವನ ತಂದೆ ಈಜಿಪ್ಟಿನವನು. ಪಾಳೆಯದಲ್ಲಿದ್ದ ಇಸ್ರೇಲರ ಮಧ್ಯದಿಂದ ಅವನು ಹೊರಬಂದನು. ಅವನು ಒಬ್ಬ ಇಸ್ರೇಲನೊಡನೆ ಜಗಳವಾಡತೊಡಗಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಇಸ್ರಾಯೇಲರ ಪಾಳೆಯದಲ್ಲಿ, ಇಸ್ರಾಯೇಲನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬಂದನು.
Kannada BSI Bible 2016
ಇದಲ್ಲದೆ ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ ಐಗುಪ್ತನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲ್ ಮಕ್ಕಳ ಮಧ್ಯದೊಳಗಿಂದ ಹೊರಗೆ ಬಂದನು; ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಒಬ್ಬರಿಗೊಬ್ಬರು ಜಗಳವಾಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಬಂದು ಇಸ್ರಾಯೇಲ್ಯರ ಪಾಳೆಯದಲ್ಲಿ ಇಸ್ರಾಯೇಲ್ಯನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬೈದು
Kannada Bible (KNCL) BSI 2016
ಇಸ್ರಯೇಲ್ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ವ್ಯಕ್ತಿ ಇದ್ದನು. ಇವನು ಇಸ್ರಯೇಲರ ಪಾಳೆಯಕ್ಕೆ ಬಂದು ಇಸ್ರಯೇಲನೊಬ್ಬನ ಸಂಗಡ ಜಗಳವಾಡಿ, ಬೈದುದು ಮಾತ್ರವಲ್ಲದೆ ಸರ್ವೇಶ್ವರ ಸ್ವಾಮಿಯನ್ನು ದೂಷಿಸಿ ಶಾಪ ಹಾಕಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ, ಈಜಿಪ್ಟಿನವನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲರ ಪಾಳ್ಯಕ್ಕೆ ಬಂದನು. ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಜಗಳವಾಡಿದರು.