Leviticus 24:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಎಣ್ಣೆ ಮರದ ಕಾಯಿಗಳನ್ನು ಕುಟ್ಟಿ ತೆಗೆದ ಶುದ್ಧವಾದ ಎಣ್ಣೆಯನ್ನು ಇಸ್ರೇಲರು ನಿನ್ನ ಬಳಿಗೆ ತರಬೇಕೆಂದು ಆಜ್ಞಾಪಿಸು. ದೇವದರ್ಶನಗುಡಾರದಲ್ಲಿರುವ ದೀಪಗಳನ್ನು ಉರಿಸಲು ಆ ಎಣ್ಣೆ ಬೇಕಾಗಿರುತ್ತದೆ. ಆ ದೀಪಗಳು ಆರಿಹೋಗದೆ ಉರಿಯುತ್ತಲೇ ಇರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವುದಕ್ಕಾಗಿ ಇಸ್ರಾಯೇಲರು ಎಣ್ಣೆಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
Kannada BSI Bible 2016
ಬೆಳಕಿ ಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿ ರುವಂತೆ ಅವರು ಕುಟ್ಟಿದ ಶುದ್ಧವಾದ ಹಿಪ್ಪೇ ಎಣ್ಣೆಯನ್ನು ನಿನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವದಕ್ಕಾಗಿ ಇಸ್ರಾಯೇಲ್ಯರು ಎಣ್ಣೇಮರದ ಕಾಯಿಗಳನ್ನು ಕುಟ್ಟಿತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
Kannada Bible (KNCL) BSI 2016
“ದೇವಸ್ಥಾನದಲ್ಲಿರುವ ದೀಪಗಳನ್ನು ಪ್ರತಿನಿತ್ಯವೂ ಉರಿಸಬೇಕು. ಇದಕ್ಕಾಗಿ ಇಸ್ರಯೇಲರು ಎಣ್ಣೇಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಅಪ್ಪಟ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.