Leviticus 24:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿ ಸಾಲಿನಲ್ಲಿ ಶುದ್ಧವಾದ ಧೂಪದ್ರವ್ಯವನ್ನಿಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಸಮರ್ಪಣೆಯನ್ನು ಯೆಹೋವನ ಜ್ಞಾಪಕಕ್ಕೆ ತರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವುದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಬೇಕು.
Kannada BSI Bible 2016
ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದೊಂದು ರಾಶಿಯ ಮೇಲೆ ಸ್ವಚ್ಫವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಲ್ಪಡಬೇಕು.
Kannada Bible (KNCL) BSI 2016
ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಸಾಂಬ್ರಾಣಿಯನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸಲು ಆ ಸಾಂಬ್ರಾಣಿಯನ್ನು ಸರ್ವೇಶ್ವರನಿಗೆ ಹೋಮಮಾಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾಗಿ ಇರುವಂತೆಯೂ, ಬೆಂಕಿಯ ಮೂಲಕ ಯೆಹೋವ ದೇವರಿಗೆ ಸಮರ್ಪಣೆಯಾಗುವಂತೆಯೂ, ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.