Leviticus 25:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅವನು ಭೂಮಿಯನ್ನು ಮಾರಿ ಎಷ್ಟು ವರ್ಷವಾಯಿತೆಂದು ಲೆಕ್ಕ ಮಾಡಬೇಕು. ಅವನು ಆ ಸಂಖ್ಯೆಯನ್ನು ಉಪಯೋಗಿಸಿ ಭೂಮಿಗೆ ಕೊಡತಕ್ಕ ಹಣವನ್ನು ನಿರ್ಧರಿಸಬೇಕು. ಬಳಿಕ ಅವನು ಭೂಮಿಯನ್ನು ಮರಳಿ ಕೊಂಡುಕೊಳ್ಳಬೇಕು. ಆಗ ಭೂಮಿಯು ಮತ್ತೆ ಅವನ ಸ್ವತ್ತಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಭೂಮಿಯನ್ನು ಮಾರಿದಂದಿನಿಂದ ಕಳೆದ ವರ್ಷಗಳನ್ನು ಬಿಟ್ಟು ಉಳಿದ ಕ್ರಯವನ್ನು ಕೊಟ್ಟು ತನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
Kannada BSI Bible 2016
ಅವನು ಅದನ್ನು ಮಾರಿದ ವರುಷಗಳನ್ನು ಲೆಕ್ಕಿಸಿ ಅದನ್ನು ಮಾರಿದವನಿಗೆ ಮಿಗಿಲಾದದ್ದನ್ನು ಪೂರ್ತಿಮಾಡಿ ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬಹುದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಭೂವಿುಯನ್ನು ಮಾರಿದಂದಿನಿಂದ ಕಳೆದ ವರುಷಗಳನ್ನು ಬಿಟ್ಟು ವಿುಕ್ಕ ಕ್ರಯವನ್ನು ಕೊಟ್ಟು ತನ್ನ ಭೂವಿುಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
Kannada Bible (KNCL) BSI 2016
ಆ ಭೂಮಿಯನ್ನು ಮಾರಿದಂದಿನಿಂದ ಕಳೆದ ವರ್ಷಗಳನ್ನು ಬಿಟ್ಟು, ಉಳಿದ ಅವಧಿಗೆ ಕ್ರಯಕೊಟ್ಟು ತನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಅದನ್ನು ಮಾರಿದ ವರ್ಷಗಳನ್ನು ಲೆಕ್ಕಿಸಿ, ಅದನ್ನು ಮಾರಿದವನಿಗೆ ಮಿಕ್ಕ ಕ್ರಯವನ್ನು ಪೂರ್ತಿಮಾಡಿ, ತನ್ನ ಸ್ವಂತ ಹೊಲವನ್ನು ಸ್ವಾಧೀನಪಡಿಸಿಕೊಳ್ಳಬಹುದು.