Leviticus 25:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯಾವನಾದರೂ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ, ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಪಡೆಯುವ ಹಕ್ಕು ಅವನಿಗೆ ಇನ್ನೂ ಇರುತ್ತದೆ. ಮನೆಯನ್ನು ಬಿಡಿಸಿಕೊಳ್ಳುವ (ಮರಳಿ ಪಡೆಯುವ) ಹಕ್ಕು ಒಂದು ವರ್ಷದವರೆಗೆ ಇರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಯಾವನಾದರೂ ಪೌಳಿ ಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರ್ಷ ಪೂರ್ತಿಯಾಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು; ಪೂರಾ ಒಂದು ವರ್ಷದ ತನಕ ಅದನ್ನು ಬಿಡಿಸುವ ಅಧಿಕಾರವು ಅವನಿಗಿರುವುದು.
Kannada BSI Bible 2016
ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದ ಲ್ಲಿರುವ ನಿವಾಸದ ಮನೆಯನ್ನು ಮಾರಿದರೆ ಅದನ್ನು ಮಾರಿದ ಒಂದು ಪೂರ್ಣ ವರುಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು; ಒಂದು ಪೂರ್ಣ ವರುಷ
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ಪೌಳಿ ಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನ ಮೊದಲುಗೊಂಡು ಒಂದು ವರುಷ ಪೂರ್ತಿಯಾಗುವದರೊಳಗೆ ಈಡುಕೊಟ್ಟು ಬಿಡಿಸಬಹುದು; ಪೂರಾ ಒಂದು ವರುಷದ ತನಕ ಅದನ್ನು ಬಿಡಿಸುವ ಅಧಿಕಾರವು ಅವನಿಗಿರುವದು.
Kannada Bible (KNCL) BSI 2016
“ಯಾವನಾದರು ಕೋಟೆಯಿರುವ ಪಟ್ಟಣದ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನದಿಂದ ಒಂದು ವರ್ಷ ಪೂರ್ತಿಯಾಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು. ಒಂದು ವರ್ಷ ಪೂರ್ತಿ ಅದನ್ನು ಬಿಡಿಸುವ ಹಕ್ಕು ಅವನಿಗಿರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದಲ್ಲಿರುವ ನಿವಾಸದ ಮನೆಯನ್ನು ಮಾರಿದರೆ, ಅದನ್ನು ಮಾರಿದ ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು. ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡಿಸಬಹುದು.