Leviticus 25:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಆರು ವರ್ಷಗಳು ನಿಮ್ಮ ಹೊಲದಲ್ಲಿ ಬೀಜಬಿತ್ತುವಿರಿ. ಆರು ವರ್ಷಗಳು ನಿಮ್ಮ ದ್ರಾಕ್ಷಿತೋಟಗಳಲ್ಲಿ ಕೆಲಸಮಾಡುವಿರಿ. ಅದರ ಫಲಗಳನ್ನು ಒಟ್ಟುಗೂಡಿಸುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರು ವರ್ಷಗಳು ನೀವು ಹೊಲದಲ್ಲಿ ಬೀಜವನ್ನು ಬಿತ್ತಬಹುದು, ದ್ರಾಕ್ಷಿ ತೋಟದ ಕೆಲಸವನ್ನು ನಡೆಸಬಹುದು ಮತ್ತು ಹೊಲತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.
Kannada BSI Bible 2016
ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರು ವರುಷಗಳು ನೀವು ಹೊಲದಲ್ಲಿ ಬೀಜವನ್ನು ಬಿತ್ತಬಹುದು, ದ್ರಾಕ್ಷೇತೋಟದ ಕೆಲಸವನ್ನು ನಡಿಸಬಹುದು; ಹೊಲತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.
Kannada Bible (KNCL) BSI 2016
ಆರು ವರ್ಷಗಳು ನೀವು ಹೊಲದಲ್ಲಿ ಬಿತ್ತನೆ ಮಾಡಬಹುದು. ದ್ರಾಕ್ಷಿತೋಟದ ಕೆಲಸವನ್ನು ಮಾಡಬಹುದು. ಹೊಲತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆರು ವರ್ಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು. ಆರು ವರ್ಷ ನೀವು ನಿಮ್ಮ ದ್ರಾಕ್ಷಿತೋಟವನ್ನು ಕತ್ತರಿಸಬೇಕು, ಅವುಗಳಿಂದ ಫಲವನ್ನು ಕೂಡಿಸಬೇಕು.