Leviticus 25:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಮಾಲಿಕನು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮನೆಯನ್ನು ಮರಳಿ ಕೊಂಡುಕೊಳ್ಳದಿದ್ದರೆ, ಆಗ ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಸೇರುವುದು. ಮನೆಯು ಜ್ಯೂಬಿಲಿ ವರ್ಷದಲ್ಲಿ ಅದರ ಮೊದಲಿನ ಯಜಮಾನನಿಗೆ ಸೇರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೌಳಿಗೋಡೆಯುಳ್ಳ ಪಟ್ಟಣದಲ್ಲಿರುವ ಆ ಮನೆ ಒಂದು ವರ್ಷದೊಳಗಾಗಿ ಬಿಡಿಸಿಕೊಳ್ಳಲು ಸಾಧ್ಯವಾಗದೆ ಹೋದರೆ, ಅದು ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗಿ ಮಾರಿದವನಿಗೆ ಮತ್ತು ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು.
Kannada BSI Bible 2016
ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪೌಳಿ ಗೋಡೆಯುಳ್ಳ ಪಟ್ಟಣದಲ್ಲಿರುವ ಆ ಮನೆ ಒಂದು ವರುಷದೊಳಗಾಗಿ ಬಿಡಿಸಲ್ಪಡದೆ ಹೋದರೆ ಅದು ಜೂಬಿಲಿ ಸಂವತ್ಸರದಲ್ಲಿಯೂ ಬಿಡುಗಡೆಯಾಗದೆ ಕ್ರಯಕೊಟ್ಟವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವದು.
Kannada Bible (KNCL) BSI 2016
ಕೋಟೆಯಿರುವ ಪಟ್ಟಣದ ಆ ಮನೆಯನ್ನು ಒಂದು ವರ್ಷದೊಳಗೆ ಬಿಡಿಸಲಾಗದೆ ಹೋದರೆ ಅದು ಜೂಬಿಲಿ ಸಂವತ್ಸರದಲ್ಲೂ ಬಿಡುಗಡೆ ಆಗದೆ ಕ್ರಯಕೊಟ್ಟವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ಉಳಿಯುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ವರ್ಷವು ಪೂರ್ಣವಾಗುವುದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ, ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು. ಜೂಬಿಲಿಯ ವರ್ಷದಲ್ಲಿ ಅದು ಬಿಡುಗಡೆಯಾಗಬಾರದು.