Leviticus 25:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಒಂದುವೇಳೆ ನಿಮ್ಮ ಸ್ವದೇಶದ ವ್ಯಕ್ತಿಯೊಬ್ಬನು ಬಹಳ ಬಡವನಾಗಿ ಗತಿಹೀನನಾಗಬಹುದು. ಅವನು ನಿಮ್ಮ ಮಧ್ಯದಲ್ಲಿ ಪ್ರವಾಸಿಯಂತೆ ವಾಸಿಸಲು ನೀವು ಅವಕಾಶ ಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು.
Kannada BSI Bible 2016
ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳುಕೊಂಡ ಪರವಾಸಿಯೆಂದು ಉದ್ಧಾರಮಾಡಬೇಕು.
Kannada Bible (KNCL) BSI 2016
“ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ನೀವು ಅವನನ್ನು ನಿಮ್ಮ ನಡುವೆ ತಂಗಿರುವ ಆಗಂತುಕನೆಂದು ಭಾವಿಸಿ ಸಹಾಯಮಾಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣವಾಗಿ ಬಿದ್ದುಕೊಂಡರೆ, ಅವನು ಪರಕೀಯನಾಗಿದ್ದರೂ, ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡಬೇಕು.