Leviticus 25:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಏಳನೆಯ ವರ್ಷ ಯಾವ ವ್ಯವಸಾಯ ಮಾಡಬಾರದ ವಿಶ್ರಾಂತಿ ಕಾಲವಾಗಿಯೂ ಮತ್ತು ಯೆಹೋವನಿಗೆ ಆಚರಿಸಬೇಕಾದ ಸಬ್ಬತ್ ಕಾಲವಾಗಿಯೂ ಇರಬೇಕು. ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.
Kannada BSI Bible 2016
ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಏಳನೆಯ ವರುಷವು ಯಾವ ಬೇಸಾಯವೂ ನಡೆಯಬಾರದ ವಿಶ್ರಾಂತಿಕಾಲವಾಗಿಯೂ ಯೆಹೋವನಿಗೆ ಆಚರಿಸಬೇಕಾದ ಸಬ್ಬತ್‍ಕಾಲವಾಗಿಯೂ ಇರಬೇಕು; ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷೇತೋಟದ ಕೆಲಸವನ್ನು ನಡಿಸಬಾರದು.
Kannada Bible (KNCL) BSI 2016
ಆದರೆ ಏಳನೆಯ ವರ್ಷ ಯಾವ ವ್ಯವಸಾಯವನ್ನೂ ಮಾಡಬಾರದು. ಅದು ವಿಶ್ರಾಂತಿಕಾಲವಾಗಿಯೂ ಸರ್ವೇಶ್ವರನ ಗೌರವಾರ್ಥ ಸಬ್ಬತ್ ಕಾಲವಾಗಿಯೂ ಇರಬೇಕು. ಆ ವರ್ಷ ಹೊಲದಲ್ಲಿ ವ್ಯವಸಾಯ ಮಾಡಬಾರದು; ದ್ರಾಕ್ಷೀ ತೋಟದ ಕೆಲಸವನ್ನೂ ಕೈಬಿಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಏಳನೆಯ ವರ್ಷವು ನೆಲಕ್ಕೆ ವಿಶ್ರಾಂತಿಕಾಲವಾಗಿರುವುದು. ಅದು ಯೆಹೋವ ದೇವರಿಗೆ ಸಬ್ಬತ್ ಕಾಲವಾಗಿರುವುದು. ನೀವು ಆ ವರ್ಷದಲ್ಲಿ ನಿಮ್ಮ ಹೊಲವನ್ನು ಬಿತ್ತಬಾರದು. ಇಲ್ಲವೆ ದ್ರಾಕ್ಷಿತೋಟವನ್ನು ಕತ್ತರಿಸಬಾರದು.