Leviticus 25:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಳಿಕ ನಿಮ್ಮನ್ನು ಬಿಟ್ಟುಹೋಗಲು ಅವನಿಗೆ ಹಕ್ಕಿದೆ. ಅವನು ತನ್ನ ಮಕ್ಕಳನ್ನು ಕರೆದುಕೊಂಡು ತನ್ನ ಕುಟುಂಬಕ್ಕೆ ಮರಳಿ ಹೋಗಬಹುದು. ಅವನು ತನ್ನ ಪೂರ್ವಿಕರ ಸ್ವತ್ತನ್ನು ಹಿಂದಕ್ಕೆ ಪಡೆಯಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವನನ್ನೂ ಮತ್ತು ಅವನ ಮಕ್ಕಳನ್ನೂ ಬಿಟ್ಟುಬಿಡಬೇಕು; ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸ್ವತ್ತಿಗೂ ಹೋಗಬಹುದು.
Kannada BSI Bible 2016
ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವನನ್ನೂ ಅವನ ಮಕ್ಕಳನ್ನೂ ಬಿಟ್ಟುಬಿಡಬೇಕು; ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸ್ವಾಸ್ತ್ಯಕ್ಕೂ ಹೋಗಬಹುದು.
Kannada Bible (KNCL) BSI 2016
ಆಗ ಅವನನ್ನೂ ಅವನ ಮಕ್ಕಳನ್ನೂ ಬಿಡುಗಡೆ ಮಾಡಬೇಕು; ಆಗ ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸೊತ್ತಿಗೂ ಹಿಂದಿರುಗಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ಅವನು ನಿನ್ನ ಬಳಿಯಿಂದ ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೆ ಹಿಂದಿರುಗಬೇಕು. ತನ್ನ ಪಿತೃಗಳ ಸೊತ್ತಿಗೂ ಅವನು ಹಿಂದಿರುಗಬೇಕು.