Leviticus 25:45 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲದೆ ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಂದ ಮಕ್ಕಳನ್ನು ಗುಲಾಮರನ್ನಾಗಿ ಕೊಂಡುಕೊಳ್ಳಬಹುದು. ಗುಲಾಮರಾದ ಮಕ್ಕಳು ನಿಮಗೆ ಸೇರಿದವರಾಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ನಡುವೆ ಇರುವ ವಿದೇಶಿಯರನ್ನೂ ಮತ್ತು ನಿಮ್ಮ ದೇಶದಲ್ಲಿ ಅವರಿಂದ ಹುಟ್ಟಿದವರನ್ನೂ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂಥವರು ನಿಮಗೆ ಸೊತ್ತಾಗಬಹುದು.
Kannada BSI Bible 2016
ಇದಲ್ಲದೆ ನಿನ್ನ ಮಧ್ಯದೊಳ ಗಿರುವ ಪರಕೀಯ ಮತ್ತು ಪ್ರವಾಸಿಗಳ ಮಕ್ಕಳಿಂದ ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ನಿನ್ನ ದೇಶದೊಳಗೆ ಅವರು ಪಡೆದಿರುವವರಿಂದ ನೀನು ಕೊಂಡುಕೊಳ್ಳಬಹುದು; ಅವರು ನಿನ್ನ ಸ್ವಾಸ್ತ್ಯವಾಗಿ ರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ನಡುವೆ ಇರುವ ಪರವಾಸಿಗಳನ್ನೂ ನಿಮ್ಮ ದೇಶದಲ್ಲಿ ಅವರಿಂದ ಹುಟ್ಟಿದವರನ್ನೂ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂಥವರು ನಿಮಗೆ ಸೊತ್ತಾಗಬಹುದು.
Kannada Bible (KNCL) BSI 2016
ನಿಮ್ಮ ನಡುವೆ ಇರುವ ಪರವಾಸಿಗಳನ್ನೂ ನಿಮ್ಮ ನಾಡಿನಲ್ಲೇ ಅವರಿಂದ ಹುಟ್ಟಿದವರನ್ನೂ ಕೊಂಡುಕೊಳ್ಳಬಹುದು. ಅಂಥವರು ನಿಮಗೆ ಸೊತ್ತಾಗಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ನಿನ್ನ ಮಧ್ಯದೊಳಗಿರುವ ಪರಕೀಯ ಪ್ರವಾಸಿಗಳ ಮಕ್ಕಳಿಂದ ಮತ್ತು ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ದೇಶದೊಳಗೆ ಅವರು ಪಡೆದವರಿಂದ ನೀನು ಕೊಂಡುಕೊಳ್ಳಬಹುದು ಮತ್ತು ಅವರು ನಿನ್ನ ಸ್ವತ್ತಾಗಿರುವರು.