Leviticus 27:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಒಬ್ಬನು ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದಕ್ಕೆ ಬೆಲೆಯನ್ನು ನಿರ್ಣಯಿಸುವನು. ಮನೆಯು ಒಳ್ಳೆಯದ್ದಾಗಿದ್ದರೂ ಕೆಟ್ಟದ್ದಾಗಿದ್ದರೂ ಯಾಜಕನು ನಿರ್ಣಯಿಸಿದ ಬೆಲೆಯೇ ಅದರ ಬೆಲೆಯಾಗಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ, ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಅಂತಿಮವಾಗಿರುವುದು.
Kannada BSI Bible 2016
ಒಬ್ಬನು ತನ್ನ ಮನೆಯನ್ನು ಕರ್ತನಿಗೆ ಪರಿಶುದ್ಧ ವಾಗಿರಲೆಂದು ಅದನ್ನು ಪರಿಶುದ್ಧ ಮಾಡಿದರೆ ಯಾಜ ಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಕ್ರಯವನ್ನು ಕಟ್ಟಬೇಕು; ಯಾಜಕನು ಕ್ರಯಕಟ್ಟುವ ಪ್ರಕಾರವೇ ಅದು ಸ್ಥಿರವಾಗಿರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಸ್ಥಿರವಾಗಿರುವದು.
Kannada Bible (KNCL) BSI 2016
“ಯಾವನಾದರು ತನ್ನ ಮನೆಯನ್ನು ಸರ್ವೇಶ್ವರನಿಗೆ ಮೀಸಲಾಗಿ ಪ್ರಟಿಷ್ಠಿಸಿದ್ದರೆ ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ಗೊತ್ತುಮಾಡಬೇಕು; ಯಾಜಕನು ಗೊತ್ತುಮಾಡಿದ ಬೆಲೆಯನ್ನು ಬದಲಾಯಿಸುವಂತಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಒಬ್ಬನು ತನ್ನ ಮನೆಯನ್ನು ಯೆಹೋವ ದೇವರಿಗೆ ಪರಿಶುದ್ಧವಾಗಿರಲೆಂದು ಪ್ರತಿಷ್ಠೆಪಡಿಸಿದರೆ, ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಪರೀಕ್ಷಿಸಿ ಕ್ರಯವನ್ನು ಕಟ್ಟಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಸ್ಥಿರವಾಗಿರಬೇಕು.