Leviticus 27:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ದನಗಳಲ್ಲಾಗಲಿ ಕುರಿಗಳಲ್ಲಾಗಲಿ ಪ್ರತಿ ಹತ್ತನೆಯ ಪಾಲನ್ನು ಯಾಜಕರು ತೆಗೆದುಕೊಳ್ಳುವರು. ಪ್ರತಿ ಹತ್ತನೆ ಪಶು ಯೆಹೋವನದಾಗಿರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದನಗಳಾಗಲಿ ಇಲ್ಲವೇ ಹಿಂಡಿನ ಆಡು ಅಥವಾ ಕುರಿಗಳಾಗಲಿ ಕುರುಬನು ಲೆಕ್ಕಮಾಡಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು.
Kannada BSI Bible 2016
ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ದನಗಳೇಯಾಗಲಿ ಆಡುಕುರಿಗಳೇಯಾಗಲಿ ಒಡೆಯನು ಲೆಕ್ಕಿಸಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು.
Kannada Bible (KNCL) BSI 2016
ದನಕರುಗಳೇ ಆಗಲಿ, ಆಡುಕುರಿಗಳೇ ಆಗಲಿ, ಒಡೆಯನು ಲೆಕ್ಕಿಸಿದ ಎಲ್ಲ ಪಶುಪ್ರಾಣಿಗಳಲ್ಲಿ ಪ್ರತಿ ಹತ್ತನೆಯದು ಸರ್ವೇಶ್ವರನಿಗೆ ಮೀಸಲಾಗಿರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ದನಕುರಿಗಳಲ್ಲಿಯೂ, ಕುರುಬನು ಎಣಿಸುವ ಪಶುಗಳಲ್ಲಿಯೂ ಹತ್ತನೆಯ ಪಾಲು, ಹತ್ತರಲ್ಲಿ ಒಂದು ಯೆಹೋವ ದೇವರಿಗೆ ಪರಿಶುದ್ಧವಾಗಿರುವುದು.