Leviticus 27:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಐದರಿಂದ ಇಪ್ಪತ್ತು ವರ್ಷದೊಳಗಿರುವ ಗಂಡಸಿನ ಬೆಲೆ ಇಪ್ಪತ್ತು ಶೆಕೆಲ್‌ಗಳಾಗಿದೆ. ಐದರಿಂದ ಇಪ್ಪತ್ತು ವರ್ಷದೊಳಗಿರುವ ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಐದು ವರ್ಷದ ವಯಸ್ಸಿನಿಂದ ಇಪ್ಪತ್ತು ವರ್ಷದ ವಯಸ್ಸಿನ ವರೆಗೆ ಪುರುಷನಿಗೋಸ್ಕರ ಇಪ್ಪತ್ತು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
Kannada BSI Bible 2016
ಐದು ವರುಷ ದವನು ಮೊದಲುಗೊಂಡು ಇಪ್ಪತ್ತು ವರುಷದವನ ವರೆಗೆ ಗಂಡಸಿನ ಕ್ರಯವು ಎಪ್ಪತ್ತು ಶೇಕೆಲುಗಳೂ ಹೆಂಗಸಿನ ಕ್ರಯವು ಹತ್ತು ಶೇಕೆಲುಗಳೂ ಆಗಿರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಐದು ವರುಷದ ವಯಸ್ಸಿನಿಂದ ಇಪ್ಪತ್ತು ವರುಷದ ವಯಸ್ಸಿನವರೆಗೆ ಪುರುಷನಿಗೋಸ್ಕರ ಇಪ್ಪತ್ತು ರೂಪಾಯಿಗಳನ್ನೂ ಸ್ತ್ರೀಗೋಸ್ಕರ ಹತ್ತು ರೂಪಾಯಿಗಳನ್ನೂ ಕೊಡಿಸಬೇಕು.
Kannada Bible (KNCL) BSI 2016
ಐದರಿಂದ ಇಪ್ಪತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಇಪ್ಪತ್ತು ಬೆಳ್ಳಿನಾಣ್ಯಗಳನ್ನು ಹಾಗು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಐದರಿಂದ ಇಪ್ಪತ್ತು ವಯಸ್ಸುಳ್ಳ ಪುರುಷನ ಕ್ರಯವು ಇಪ್ಪತ್ತು ಶೆಕೆಲ್, ಸ್ತ್ರೀ ಕ್ರಯವು ಹತ್ತು ಶೆಕೆಲ್ ಆಗಿರಬೇಕು.