Leviticus 27:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರವತ್ತು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಪುರುಷನ ಬೆಲೆ ಹದಿನೈದು ಶೆಕೆಲ್‌ಗಳು. ಸ್ತ್ರೀಯ ಬೆಲೆ ಹತ್ತು ಶೆಕೆಲ್‌ಗಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರವತ್ತು ವರ್ಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ಶೆಕೆಲ್ ಬೆಳ್ಳಿಯನ್ನು ಮತ್ತು ಸ್ತ್ರೀಗೋಸ್ಕರ ಹತ್ತು ಶೆಕೆಲ್ ಬೆಳ್ಳಿಯನ್ನು ಕೊಡಬೇಕು.
Kannada BSI Bible 2016
ಅರವತ್ತು ವರುಷವು ಅದಕ್ಕೆ ಹೆಚ್ಚಾದ ಪ್ರಾಯವುಳ್ಳ ಗಂಡಸಾಗಿದ್ದರೆ ನೀನು ನೇಮಿಸುವ ಕ್ರಯವು ಹದಿನೈದು ಶೇಕೆಲುಗಳೂ ಹೆಂಗಸಿಗೆ ಹತ್ತು ಶೇಕೆಲುಗಳೂ ಆಗಿರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರುವತ್ತು ವರುಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ರೂಪಾಯಿಗಳನ್ನೂ ಸ್ತ್ರೀಗೋಸ್ಕರ ಹತ್ತು ರೂಪಾಯಿಗಳನ್ನೂ ಕೊಡಿಸಬೇಕು.
Kannada Bible (KNCL) BSI 2016
ಅರವತ್ತು ವರ್ಷ ವಯಸ್ಸು ದಾಟಿದ ಪುರುಷನ ಪರವಾಗಿ ಹದಿನೈದು ಬೆಳ್ಳಿನಾಣ್ಯಗಳನ್ನು ಸ್ತ್ರೀಯ ಪರವಾಗಿ ಹತ್ತು ಬೆಳ್ಳಿನಾಣ್ಯಗಳನ್ನು ಕೊಡಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರವತ್ತು ವರುಷವೂ, ಅದಕ್ಕೂ ಹೆಚ್ಚಾದ ಪ್ರಾಯವುಳ್ಳ ಪುರುಷನಾಗಿದ್ದರೆ, ನೀನು ನೇಮಿಸುವ ಕ್ರಯವು ಹದಿನೈದು ಶೆಕೆಲ್, ಸ್ತ್ರೀಗೆ ಹತ್ತು ಶೆಕೆಲ್ ಆಗಿರಬೇಕು.