Leviticus 4:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಅಭಿಷಿಕ್ತನಾದ ಯಾಜಕನು ತಪ್ಪುಮಾಡಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಅರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಭಿಷಿಕ್ತನಾದ ಯಾಜಕನೇ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ, ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಸಮರ್ಪಿಸಬೇಕು.
Kannada BSI Bible 2016
ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಭಿಷಿಕ್ತನಾದ ಯಾಜಕನೇ ದೋಷಿಯಾಗಿ ಜನರೆಲ್ಲರನ್ನೂ ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಸಮರ್ಪಿಸಬೇಕು.
Kannada Bible (KNCL) BSI 2016
“ಅಭಿಷಿಕ್ತನಾದ ಯಾಜಕನೇ ಅಂಥ ದೋಷಿಯಾಗಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಕಳಂಕರಹಿತವಾದ ಪ್ರಾಯದ ಹೋರಿಯೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಅಭಿಷಿಕ್ತನಾದ ಯಾಜಕನು ಪಾಪಮಾಡಿ ಜನರ ಮೇಲೆ ಅಪರಾಧವನ್ನು ತಂದರೆ, ತಾನು ಮಾಡಿದ ಪಾಪಕ್ಕಾಗಿ ಕಳಂಕರಹಿತವಾದ ಒಂದು ಎಳೆಯ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.