Leviticus 5:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನುಷ್ಯದೇಹದಿಂದ ಉಂಟಾದ ಯಾವುದಾದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ಅದು ಅವನಿಗೆ ತಿಳಿದುಬಂದಾಗ ಅವನು ದೋಷಿಯಾಗುವನು.
Kannada BSI Bible 2016
ಮನುಷ್ಯದೇಹದಿಂದುಂಟಾದ ಯಾವದಾ ದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ತಿಳಿದು ಬಂದಾಗ ಅವನು ದೋಷಿಯಾಗುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನುಷ್ಯದೇಹದಿಂದುಂಟಾದ ಯಾವದಾದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆಹೋದರೂ ತಿಳಿದುಬಂದಾಗ ಅವನು ದೋಷಿಯಾಗುವನು.
Kannada Bible (KNCL) BSI 2016
“ಮನುಷ್ಯ ದೇಹದಿಂದುಂಟಾದ ಯಾವುದಾದರು ಒಂದು ಅಶುದ್ಧ ವಸ್ತು ತಗುಲಿದ್ದು, ಅವನಿಗೆ ತಿಳಿಯದೆ ಹೋದರೂ, ತಿಳಿದು ಬಂದಾಗ ಅವನು ದೋಷಿಯಾಗುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಲ್ಲವೆ, ಅವನು ಮನುಷ್ಯನ ಅಶುದ್ಧತ್ವವನ್ನು ತಗಲಿದರೆ, ಮನುಷ್ಯನನ್ನು ಅಶುದ್ಧಪಡಿಸುವ ಯಾವುದೇ ಅಶುದ್ಧತ್ವವಾಗಿದ್ದರೂ ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಅವನು ಅಪರಾಧಿಯಾಗಿರುವನು.