Leviticus 8:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೋಶೆಯು ಅಭಿಷೇಕತೈಲದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ವೇದಿಕೆಯ ಮೇಲೆ ಏಳು ಸಲ ಚಿಮಿಕಿಸಿದನು. ಮೋಶೆಯು ತೈಲವನ್ನು ವೇದಿಕೆಯ ಮೇಲೆ, ಅದರ ಎಲ್ಲಾ ಉಪಕರಣಗಳ ಮೇಲೆ ಚಿಮಿಕಿಸಿದನು. ಮೋಶೆಯು ತೈಲವನ್ನು ಗಂಗಾಳ ಮತ್ತು ಅದರ ಪೀಠದ ಮೇಲೂ ಚಿಮಿಕಿಸಿದನು. ಈ ರೀತಿಯಾಗಿ ಮೋಶೆಯು ಅವುಗಳನ್ನು ಪವಿತ್ರಗೊಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿಮುಕಿಸಿ, ಯಜ್ಞವೇದಿಯನ್ನು ಅದರ ಎಲ್ಲಾ ಉಪಕರಣಗಳನ್ನು, ಬೋಗುಣಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
Kannada BSI Bible 2016
ಅವನು ಅದರಿಂದ ಯಜ್ಞವೇದಿಯ ಮೇಲೆ ಏಳು ಸಾರಿ ಚಿಮುಕಿಸಿ ಯಜ್ಞ ವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಗಂಗಾಳ ವನ್ನೂ ಪೀಠವನ್ನೂ ಅಭಿಷೇಕಿಸಿ ಅವುಗಳನ್ನು ಪವಿತ್ರ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿವಿುಕಿಸಿ ವೇದಿಯನ್ನೂ ಅದರ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.
Kannada Bible (KNCL) BSI 2016
ಬಲಿಪೀಠದ ಮೇಲೆ ಏಳು ಸಾರಿ ಆ ಎಣ್ಣೆಯನ್ನು ಚಿಮುಕಿಸಿ ಬಲಿಪೀಠವನ್ನು, ಅದರ ಎಲ್ಲ ಉಪಕರಣಗಳನ್ನು ಹಾಗು ನೀರಿನ ತೊಟ್ಟಿಯನ್ನು ಅದರ ಪೀಠವನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಅದರಿಂದ ಬಲಿಪೀಠದ ಮೇಲೆ ಏಳು ಸಾರಿ ಚಿಮುಕಿಸಿ, ಬಲಿಪೀಠವನ್ನೂ, ಅದರ ಎಲ್ಲಾ ಪಾತ್ರೆಗಳನ್ನೂ, ಗಂಗಾಳವನ್ನೂ, ಅದರ ಕಾಲನ್ನೂ ಅಭಿಷೇಕಿಸಿ, ಅವುಗಳನ್ನು ಪವಿತ್ರ ಮಾಡಿದನು.