Leviticus 8:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಳಿಕ ಮೋಶೆಯು ಹೋರಿಯನ್ನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ವೇದಿಕೆಯ ಎಲ್ಲಾ ಮೂಲೆಗಳಿಗೆ ರಕ್ತವನ್ನು ಹಚ್ಚಿದನು. ಹೀಗೆ ಮೋಶೆಯು ವೇದಿಕೆಯನ್ನು ಯಜ್ಞಗಳಿಗಾಗಿ ಶುದ್ಧಗೊಳಿಸಿ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದನು; ಜನರನ್ನು ಶುದ್ಧಿಮಾಡುವ ಯಜ್ಞಗಳನ್ನು ಸಮರ್ಪಿಸುವುದಕ್ಕಾಗಿ ವೇದಿಕೆಯನ್ನು ಪ್ರತಿಷ್ಠೆಗೊಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ, ಯಜ್ಞವೇದಿಯನ್ನು ಶುದ್ಧಪಡಿಸಿ, ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಇದರ ನಿಮಿತ್ತ ದೋಷಪರಿಹಾರಕ ಆಚಾರವನ್ನು ನಡೆಸಿ, ಅದನ್ನು ಪ್ರತಿಷ್ಠಿಸಿದನು.
Kannada BSI Bible 2016
ಆಗ ಅವನು ಅದನ್ನು ವಧಿಸಿ ದನು; ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿರುವ ಕೊಂಬುಗಳಿಗೆ ಸುತ್ತಲೂ ತನ್ನ ಬೆರಳಿನಿಂದ ಹಚ್ಚಿ ಯಜ್ಞವೇದಿಯನ್ನು ಶುದ್ಧೀಕರಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಸಂಧಾನಮಾಡುವದಕ್ಕಾಗಿ ಅದನ್ನು ಪವಿತ್ರಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ ಯಜ್ಞವೇದಿಯನ್ನು ಶುದ್ಧಪಡಿಸಿ ವಿುಕ್ಕ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಯಜ್ಞವೇದಿಯ ನಿವಿುತ್ತ ದೋಷಪರಿಹಾರಕಾಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಿದನು.
Kannada Bible (KNCL) BSI 2016
ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಿ ಬಲಿಪೀಠವನ್ನು ಪ್ರತಿಷ್ಠಿಸಿದನು. ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಬಲಿಪೀಠದ ಬಗ್ಗೆ ದೋಷಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪವಿತ್ರೀಕರಿಸಿ ಪ್ರತಿಷ್ಠಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ಅದನ್ನು ವಧಿಸಿದನು. ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು, ಬಲಿಪೀಠದ ಸುತ್ತಲೂ ಇರುವ ಕೊಂಬುಗಳ ಮೇಲೆ ತನ್ನ ಬೆರಳಿನಿಂದ ಹಚ್ಚಿ, ಬಲಿಪೀಠವನ್ನು ಶುದ್ಧೀಕರಿಸಿ, ಉಳಿದ ರಕ್ತವನ್ನು ಬಲಿಪೀಠದ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಅದನ್ನು ಪವಿತ್ರ ಮಾಡಿದನು.