Leviticus 8:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ತರುವಾಯ ಮೋಶೆಯು ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳಿದನು: “ನೀವು ಮಾಂಸವನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಬೇಯಿಸಿ ತಿನ್ನಬೇಕು. ಪ್ರತಿಷ್ಠೆಕಾಣಿಕೆಯ ಬುಟ್ಟಿಯಲ್ಲಿರುವ ರೊಟ್ಟಿಯೊಡನೆ ಅದನ್ನು ಅಲ್ಲಿ ತಿನ್ನಿರಿ. ಮಾಂಸವನ್ನೂ ರೊಟ್ಟಿಯನ್ನೂ ಆ ಸ್ಥಳದಲ್ಲಿ ತಿನ್ನಿರಿ. ನಾನು ಹೇಳುವ ಹಾಗೆ ಇದನ್ನು ಮಾಡಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋಶೆ ಆರೋನನಿಗೂ ಮತ್ತು ಅವನ ಮಕ್ಕಳಿಗೂ, “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಿ ಅದನ್ನು ಮತ್ತು ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನು ಅಲ್ಲೇ ಊಟಮಾಡಬೇಕು. ‘ಆರೋನನೂ ಅವನ ಮಕ್ಕಳೂ ಅದನ್ನು ತಿನ್ನಬೇಕು’ ಎಂಬುದೇ ನನಗಾದ ಅಪ್ಪಣೆ.
Kannada BSI Bible 2016
ಮೋಶೆಯು ಆರೋನನಿಗೂ ಅವನ ಕುಮಾರರಿಗೂ--ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ; ಅದನ್ನು ಪ್ರತಿಷ್ಠಿತ ಬುಟ್ಟಿ ಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು; ನಾನು ಆಜ್ಞಾಪಿಸಿ ಹೇಳಿದಂತೆ ಆರೋನನೂ ಅವನ ಕುಮಾ ರರೂ ಅದನ್ನು ತಿನ್ನಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಮೋಶೆ ಆರೋನನಿಗೂ ಅವನ ಮಕ್ಕಳಿಗೂ ಹೀಗಂದನು - ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಲಿನ ಹತ್ತಿರ ಬೇಯಿಸಿ ಅದನ್ನೂ ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನೂ ಅಲ್ಲೇ ಊಟಮಾಡಬೇಕು.
Kannada Bible (KNCL) BSI 2016
ಆರೋನನಿಗೂ ಅವನ ಮಕ್ಕಳಿಗೂ ಮೋಶೆ ಹೀಗೆಂದನು: “ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ಬೇಯಿಸಬೇಕು. ಅದನ್ನೂ ಯಾಜಕಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ರೊಟ್ಟಿಗಳನ್ನೂ ನೀವು ಅಲ್ಲೆ ಊಟಮಾಡಬೇಕು. ಇದು ಸರ್ವೇಶ್ವರನು ನನಗಿತ್ತ ಆಜ್ಞೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯು ಆರೋನನಿಗೂ, ಅವನ ಪುತ್ರರಿಗೂ, “ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ. ಅದನ್ನು ಪ್ರತಿಷ್ಠಿತ ಬುಟ್ಟಿಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು. ನಾನು ಆಜ್ಞಾಪಿಸಿ ಹೇಳಿದಂತೆ, ‘ಆರೋನನು ಮತ್ತು ಅವನ ಪುತ್ರರು ಅದನ್ನು ತಿನ್ನಬೇಕು.’