Leviticus 9:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುರಿಯನ್ನು ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನು, ಟಗರನ್ನು ಧಾನ್ಯನೈವೇದ್ಯಕ್ಕಾಗಿ ಎಣ್ಣೆಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಯೆಹೋವನ ಮುಂದೆ ಬರಬೇಕೆಂದು ಆಜ್ಞಾಪಿಸು’” ಅಂದನು.
Kannada BSI Bible 2016
ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಟಗರನ್ನೂ ನೈವೇದ್ಯಕ್ಕಾಗಿ ಎಣ್ಣೆವಿುಶ್ರವಾದ ಪದಾರ್ಥವನ್ನೂ ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು ಅಂದನು.
Kannada Bible (KNCL) BSI 2016
ಶಾಂತಿಸಮಾಧಾನ ಬಲಿಗಾಗಿ ಒಂದು ಹೋರಿ ಹಾಗು ಒಂದು ಟಗರನ್ನು ಮತ್ತು ನೈವೇದ್ಯಕ್ಕಾಗಿ ಎಣ್ಣೆ ಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಾಗಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆಹಾರದ ಬಲಿ ಎಣ್ಣೆಯೊಂದಿಗೆ ಬೆರೆತಿರಬೇಕು. ಏಕೆಂದರೆ ಈ ದಿನವೇ ಯೆಹೋವ ದೇವರು ನಿಮಗೆ ಕಾಣಿಸಿಕೊಳ್ಳುವರು,’ ” ಎಂದನು.