Luke 14:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದೇನೆಂದರೆ, “ಯಾವನಾದರೂ ನಿನ್ನನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು
Kannada BSI Bible 2016
ಯಾವನಾದರೂ ನಿನ್ನನ್ನು ಮದುವೆಗೆ ಕರೆದರೆ ಉನ್ನತ ಸ್ಥಳದಲ್ಲಿ ಕೂತುಕೊಳ್ಳಬೇಡ; ಯಾಕಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಕರೆದಿರ ಬಹುದು;
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ನಿನ್ನನ್ನು ಮದುವೇ ಊಟಕ್ಕೆ ಕರೆದರೆ ಪಂಙ್ತಿಯೊಳಗೆ ಮೊದಲನೆಯ ಸ್ಥಾನದಲ್ಲಿ ಕೂತುಕೊಳ್ಳಬೇಡ; ಒಂದು ವೇಳೆ ನಿನಗಿಂತ ಮಾನವುಳ್ಳವನನ್ನು ಅವನು ಕರೆದಿರಬಹುದು,
Kannada Bible (KNCL) BSI 2016
“ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು.