Luke 16:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಳಿಕ ಮತ್ತೊಬ್ಬನನ್ನು, ‘ನೀನು ಎಷ್ಟು ಕೊಡಬೇಕು?’ ಎಂದು ಕೇಳಲು ಅವನು, ‘ನೂರು ಖಂಡುಗ ಗೋದಿ’ ಅಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಎಂದು ಬರೆ’ ಎಂದು ಹೇಳಿದನು.
Kannada BSI Bible 2016
ಇದಲ್ಲದೆ ಅವನು ಮತ್ತೊಬ್ಬನಿಗೆ--ನೀನು ಸಲ್ಲಿಸಬೇಕಾದದ್ದು ಎಷ್ಟು? ಅನ್ನಲು ಅವನು--ಒಂದು ನೂರು ಅಳತೆ ಗೋಧಿ ಅಂದನು. ಆಗ ಅವನು--ನಿನ್ನ ಬೆಲೆ ಪಟ್ಟಿ ಯನ್ನು ತೆಗೆದುಕೊಂಡು ಎಂಭತ್ತು ಎಂದು ಬರೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಳಿಕ ಮತ್ತೊಬ್ಬನನ್ನು - ನೀನು ಏನು ಕೊಡಬೇಕು ಎಂದು ಕೇಳಲು ಅವನು - ನೂರು ಖಂಡುಗ ಗೋದಿ ಅಂದಾಗ ಅವನಿಗೆ - ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಅಂತ ಬರಿ ಎಂದು ಹೇಳಿದನು.
Kannada Bible (KNCL) BSI 2016
ಬಳಿಕ ಇನ್ನೊಬ್ಬನನ್ನು ಕರೆದು, ‘ನೀನೆಷ್ಟು ಸಾಲ ತೀರಿಸಬೇಕು?’ ಎಂದು ಕೇಳಿದ. ಅವನು ‘ನೂರು ಖಂಡುಗ ಗೋದಿ’ ಎಂದಾಗ, ‘ಇಗೋ, ನಿನ್ನ ಪತ್ರ, “ಎಂಬತ್ತು” ಎಂದು ಬರೆ,’ ಎಂದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಬಳಿಕ ಅವನು ಮತ್ತೊಬ್ಬನಿಗೆ, ‘ನೀನೆಷ್ಟು ಸಾಲ ತೀರಿಸಬೇಕು,’ ಎಂದು ಕೇಳಲು, “30 ‘ಟನ್ ಗೋಧಿ,’ ಎಂದನು. “ಆಗ ಅವನು, ‘ನಿನ್ನ ಸಾಲ ಪತ್ರವನ್ನು ತೆಗೆದುಕೊಂಡು 24 ಟನ್ ಎಂದು ಬರೆ,’ ಎಂದನು.