Luke 22:54 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.
Kannada BSI Bible 2016
ಆಗ ಅವರು ಆತನನ್ನು ತೆಗೆದುಕೊಂಡು ಮಹಾ ಯಾಜಕನ ಮನೆಯೊಳಕ್ಕೆ ಸಾಗಿಸಿಕೊಂಡು ಬಂದರು. ಪೇತ್ರನು ದೂರದಿಂದ ಹಿಂಬಾಲಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಆತನನ್ನು ಹಿಡಿದು ಸಾಗಿಸಿಕೊಂಡು ಮಹಾಯಾಜಕನ ಮನೆಯೊಳಕ್ಕೆ ತೆಗೆದುಕೊಂಡು ಹೋದರು; ಪೇತ್ರನು ದೂರದಿಂದ ಹಿಂದೆಹಿಂದೆ ಹೋಗುತ್ತಿದ್ದನು.
Kannada Bible (KNCL) BSI 2016
ಅನಂತರ ಅವರು ಯೇಸುಸ್ವಾಮಿಯನ್ನು ಬಂಧಿಸಿ ಪ್ರಧಾನಯಾಜಕನ ಭವನಕ್ಕೆ ಕರೆದುಕೊಂಡು ಹೋದರು. ದೂರದಿಂದ ಪೇತ್ರನು ಹಿಂದೆಹಿಂದೆಯೇ ಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು.