Luke 22:59 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
Kannada BSI Bible 2016
ಹೆಚ್ಚು ಕಡಿಮೆ ಒಂದು ತಾಸು ಕಳೆದ ನಂತರ ಮತ್ತೊಬ್ಬನು ದೃಢನಿಶ್ಚಯವಾಗಿ--ನಿಜವಾ ಗಿಯೂ ಇವನು ಸಹ ಅವನೊಂದಿಗೆ ಇದ್ದನು; ಯಾಕಂದರೆ ಇವನು ಗಲಿಲಾಯದವನಾಗಿದ್ದಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು - ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ ಎಂದು ದೃಢವಾಗಿ ಹೇಳಿದನು.
Kannada Bible (KNCL) BSI 2016
ಸುಮಾರು ಒಂದು ಗಂಟೆಕಾಲ ಕಳೆದ ಮೇಲೆ ಮತ್ತೊಬ್ಬನು, “ಖಂಡಿತವಾಗಿ ಇವನು ಕೂಡ ಯೇಸುವಿನ ಸಂಗಡ ಇದ್ದವನು. ಏಕೆಂದರೆ, ಇವನೂ ಗಲಿಲೇಯದವನೇ,” ಎಂದು ಒತ್ತಿ ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು.