Luke 23:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ, ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ, ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ” ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು.
Kannada BSI Bible 2016
ಅವರು ಆತನ ಮೇಲೆ ದೂರು ಹೇಳಲಾರಂಭಿಸಿ--ಈ ಮನುಷ್ಯನು ಜನಾಂಗವನ್ನು ತಪ್ಪು ದಾರಿಗೆ ನಡಿಸುವನಾಗಿ ತಾನೇ ಕ್ರಿಸ್ತನೆಂಬ ಅರಸನಾಗಿದ್ದನೆಂದೂ ಹೇಳಿ ಕೈಸರನಿಗೆ ಕಂದಾಯ ಕೊಡದಂತೆ ಇವನು ಅಡ್ಡಿ ಮಾಡುತ್ತಿರುವದನ್ನು ನಾವು ನೋಡಿದ್ದೇವೆಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದು ಹೇಳುತ್ತಾ ಕೈಸರನಿಗೆ ತೆರಿಗೆಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸು ಕೆಡಿಸುವದನ್ನು ನಾವು ಕಂಡೆವು ಎಂಬದಾಗಿ ಆತನ ಮೇಲೆ ದೂರು ಹೇಳುವದಕ್ಕೆ ತೊಡಗಿದರು.
Kannada Bible (KNCL) BSI 2016
ಅಲ್ಲಿ ಆತನ ಮುಂದೆ, “ಇವನು ರೋಮ್ ಚಕ್ರವರ್ತಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ. ತಾನೇ ‘ಕ್ರಿಸ್ತ, ಒಬ್ಬ ಅರಸ,’ ಎಂದು ಹೇಳಿಕೊಳ್ಳುತ್ತಾನೆ. ಹೀಗೆ ನಮ್ಮ ಜನತೆ ದಂಗೆಯೇಳುವಂತೆ ಪ್ರಚೋದಿಸುತ್ತಾನೆ. ಇದನ್ನೆಲ್ಲಾ ನಾವು ಕಂಡುಹಿಡಿದಿದ್ದೇವೆ,” ಎಂದು ದೂರತೊಡಗಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.