Luke 23:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಆ ಗುಂಪಿನಲ್ಲಿ ಕೆಲವು ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿಗಾಗಿ ಗೋಳಾಡುತ್ತಾ ಇದ್ದರು.
Kannada BSI Bible 2016
ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರೂ ಸ್ತ್ರೀಯರೂ ದೊಡ್ಡ ಗುಂಪಾಗಿ ಆತನ ಹಿಂದೆ ಬಂದರು. ಆ ಸ್ತ್ರೀಯರು ಎದೆಬಡುಕೊಳ್ಳುತ್ತಾ ಆತನ ವಿಷಯದಲ್ಲಿ ಗೋಳಾಡುತ್ತಾ ಇದ್ದರು.
Kannada Bible (KNCL) BSI 2016
ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು.