Luke 8:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು.
Kannada BSI Bible 2016
ಇದಾದ ಮೇಲೆ ಒಂದಾನೊಂದು ದಿವಸ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ಅವರಿಗೆ--ನಾವು ಕೆರೆಯ ಆಚೇದಡಕ್ಕೆ ಹೋಗೋಣ ಎಂದು ಹೇಳಿದಾಗ ಅವರು ಹೊರಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದಾನೊಂದು ದಿನದಲ್ಲಿ ಆತನು ತನ್ನ ಶಿಷ್ಯರ ಸಂಗಡ ಒಂದು ದೋಣಿಯನ್ನು ಹತ್ತಿ ಕೆರೆಯ ಆಚೇದಡಕ್ಕೆ ಹೋಗೋಣ ಎಂದು ಅವರಿಗೆ ಹೇಳಲು ಅವರು ದೋಣಿಯನ್ನು ನೀರಿನೊಳಗೆ ನೂಕಿ ಹೊರಟರು.
Kannada Bible (KNCL) BSI 2016
ಒಂದು ದಿನ ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ದೋಣಿಯನ್ನು ಹತ್ತಿ, “ಸರೋವರದ ಆಚೆಯ ದಡಕ್ಕೆ ಹೋಗೋಣ,” ಎಂದರು. ಅಂತೆಯೇ ಎಲ್ಲರೂ ಹೊರಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ದಿನ ಯೇಸು ತಮ್ಮ ಶಿಷ್ಯರಿಗೆ, “ನಾವು ಕೆರೆಯ ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು, ಆಗ ಅವರು ದೋಣಿಯನ್ನು ಹತ್ತಿ ಹೊರಟರು.