Luke 8:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು.
Kannada BSI Bible 2016
ಆದರೆ ಅವರು ಪ್ರಯಾಣಮಾಡುತ್ತಿದ್ದಾಗ ಆತನು ನಿದ್ರಿ ಸಿದನು; ಆಗ ಬಿರುಗಾಳಿಯು ಕೆರೆಯ ಮೇಲೆ ಬೀಸಲು ದೋಣಿಯೊಳಗೆ ನೀರು ತುಂಬಿದ್ದರಿಂದ ಅವರು ಪ್ರಾಣಾಪಾಯಕ್ಕೊಳಗಾದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು; ಅಷ್ಟರಲ್ಲಿ ಬಿರುಗಾಳಿ ಕೆರೆಯ ಮೇಲೆ ಬರಲು ದೋಣಿಯೊಳಗೆ ನೀರು ತುಂಬಿಕೊಂಡದರಿಂದ ಅವರು ಅಪಾಯಕ್ಕೆ ಗುರಿಯಾದರು.
Kannada Bible (KNCL) BSI 2016
ದೋಣಿ ಸಾಗುತ್ತಿದ್ದಾಗ, ಯೇಸು ನಿದ್ರಾವಶರಾದರು. ಅಷ್ಟರಲ್ಲಿ ಸರೋವರದ ಮೇಲೆ ಬಿರುಗಾಳಿ ಎದ್ದಿತು. ದೋಣಿ ನೀರಿನಿಂದ ತುಂಬಿ ಅವರೆಲ್ಲರೂ ಅಪಾಯಕ್ಕೆ ಒಳಗಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ಪ್ರಯಾಣ ಮಾಡುತ್ತಿದ್ದಾಗ, ಯೇಸು ನಿದ್ರಿಸುತ್ತಿದ್ದರು. ಆಗ ಬಿರುಗಾಳಿಯು ಸರೋವರದ ಮೇಲೆ ಬೀಸಲು, ದೋಣಿಯು ನೀರಿನಿಂದ ತುಂಬಿದ್ದರಿಂದ, ಅವರು ಅಪಾಯಕ್ಕೊಳಗಾದರು.