Luke 8:40 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನಿಗಾಗಿ ಕಾಯುತ್ತಿದ್ದು ಅವನನ್ನು ಸಂತೋಷದಿಂದ ಸ್ವೀಕರಿಸಿದರು.
Kannada BSI Bible 2016
ಇದಾದ ಮೇಲೆ ಯೇಸು ಹಿಂತಿರುಗಿದಾಗ ಜನರು ಆತನನ್ನು ಸಂತೋಷದಿಂದ ಅಂಗೀಕರಿಸಿದರು; ಯಾಕಂದರೆ ಅವರೆಲ್ಲರು ಆತನಿಗಾಗಿ ಕಾಯುತ್ತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನನ್ನು ಕಾದುಕೊಂಡಿದ್ದು ಸಂತೋಷದಿಂದ ಸ್ವೀಕರಿಸಿದರು.
Kannada Bible (KNCL) BSI 2016
ಯೇಸುಸ್ವಾಮಿ ಹಿಂದಿರುಗಿ ಬಂದುದೇ, ದಡದಲ್ಲಿ ಎದುರುನೋಡುತ್ತಿದ್ದ ಜನಸಮೂಹವು ಅವರನ್ನು ಸ್ವಾಗತಿಸಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೇಸು ಹಿಂತಿರುಗಿ ಬಂದಾಗ ಅವರ ಬರುವಿಕೆಯನ್ನು ಎದುರುನೋಡುತ್ತಿದ್ದ ಜನರೆಲ್ಲರೂ ಅವರನ್ನು ಸ್ವಾಗತಿಸಿದರು.