Luke 8:55 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು.
Kannada BSI Bible 2016
ಆಗ ಆಕೆಯು ಬದುಕಿ ಕೂಡಲೆ ಎದ್ದಳು; ಆಕೆಗೆ ಊಟಕ್ಕೆ ಕೊಡುವಂತೆ ಆತನು ಅಪ್ಪಣೆ ಕೊಟ್ಟನು.ಆಗ ಆಕೆಯ ತಂದೆತಾಯಿಗಳು ಬೆರಗಾದರು; ಆದರೆ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯ ಪ್ರಾಣ ತಿರಿಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು - ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆ ಕೊಟ್ಟನು.
Kannada Bible (KNCL) BSI 2016
ಬಾಲಕಿಗೆ ಜೀವ ಮರಳಿಬಂತು. ತಕ್ಷಣವೇ ಅವಳು ಎದ್ದಳು. ತಿನ್ನಲು ಏನನ್ನಾದರೂ ಅವಳಿಗೆ ಕೊಡಬೇಕೆಂದು ಯೇಸು ಸೂಚಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಆಕೆಯ ಪ್ರಾಣವು ಹಿಂದಿರುಗಿ ಬಂತು. ಕೂಡಲೇ ಆಕೆಯು ಎದ್ದಳು. ಆಕೆಗೆ ತಿನ್ನಲು ಏನಾದರೂ ಕೊಡುವಂತೆ ಯೇಸು ಅಪ್ಪಣೆಕೊಟ್ಟರು.