Mark 11:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು.
Kannada BSI Bible 2016
ಆಗ ಅವರು ಹೊರಟು ಹೋಗಿ ಎರಡು ದಾರಿಗಳು ಕೂಡುವ ಸ್ಥಳದಲ್ಲಿ ಹೊರಗೆ ಬಾಗಲಿನ ಬಳಿಯಲ್ಲಿ ಕಟ್ಟಿದ್ದ ಕತ್ತೇಮರಿಯನ್ನು ಬಿಚ್ಚುತ್ತಿರುವಾಗ
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಒಂದು ಕತ್ತೇಮರಿ ಕಟ್ಟಿರುವದನ್ನು ಕಂಡು ಅದನ್ನು ಬಿಚ್ಚಿದರು.
Kannada Bible (KNCL) BSI 2016
ಶಿಷ್ಯರು ಹೋಗಿ ಬೀದಿಯಲ್ಲಿದ್ದ ಹೇಸರಗತ್ತೆಯ ಮರಿಯೊಂದನ್ನು ಕಂಡರು. ಬಾಗಿಲಿನ ಬಳಿ ಕಟ್ಟಿಹಾಕಿದ್ದ ಅದನ್ನು ಶಿಷ್ಯರು ಬಿಚ್ಚಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ,