Mark 13:19 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಏಕೆಂದರೆ ಆ ದಿನಗಳು ಬಹಳ ಸಂಕಟದಿಂದ ತುಂಬಿರುತ್ತವೆ. ದೇವರು ಈ ಲೋಕವನ್ನು ಸೃಷ್ಟಿಮಾಡಿದಂದಿನಿಂದ ಅಂಥ ಸಂಕಟ ಇದುವರೆಗೂ ಆಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.
Kannada BSI Bible 2016
ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
Kannada Bible (KNCL) BSI 2016
ಆಗ ಬರಲಿರುವ ಸಂಕಷ್ಟಗಳು ದೈವಸೃಷ್ಟಿಯ ಆದಿಯಿಂದ ಇರಲಿಲ್ಲ. ಇನ್ನು ಮುಂದಕ್ಕೂ ಇರುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.