Mark 15:46 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
Kannada BSI Bible 2016
ಆಗ ಅವನು ಶುಭ್ರವಾದ ನಾರು ಮಡಿಯನ್ನು ಕೊಂಡು ಕೊಂಡು ಆತನನ್ನು (ಶಿಲುಬೆಯಿಂದ) ಇಳಿಸಿ ಆ ನಾರುಮಡಿಯಲ್ಲಿ ಆತನನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಲಿಗೆ ಒಂದು ಕಲ್ಲನ್ನು ಉರುಳಿಸಿದನು.ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋಸೇಫನು ನಾರು ಮಡಿಯನ್ನು ಕೊಂಡುತಂದು ಆತನನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
Kannada Bible (KNCL) BSI 2016
ಜೋಸೆಫನು ನಾರುಮಡಿ ವಸ್ತ್ರವನ್ನು ಕೊಂಡುಕೊಂಡು ಬಂದು, ಯೇಸುವನ್ನು ಶಿಲುಬೆಯಿಂದ ಇಳಿಸಿ, ಆ ವಸ್ತ್ರದಿಂದ ಸುತ್ತಿದನು. ಅನಂತರ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಅದನ್ನಿರಿಸಿ, ಸಮಾಧಿಯ ದ್ವಾರಕ್ಕೆ ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಶುಭ್ರವಾದ ನಾರುಬಟ್ಟೆಯನ್ನು ಕೊಂಡುಕೊಂಡು ಬಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ಆ ನಾರುಬಟ್ಟೆಯಲ್ಲಿ ಅದನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಯೇಸುವಿನ ಸಮಾಧಿಯ ದ್ವಾರಕ್ಕೆ ಒಂದು ಬಂಡೆಯನ್ನು ಉರುಳಿಸಿದನು.