Mark 7:4 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ಸಂತೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಇರುತ್ತಿರಲಿಲ್ಲ. ಬಹು ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು.
Kannada BSI Bible 2016
ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುವದಿಲ್ಲ; ಮತ್ತು ಅವರು ಬಟ್ಟಲುಗಳನ್ನು ಪಾತ್ರೆಗಳನ್ನು ಹಿತ್ತಾಳೆಯ ಪಾತ್ರೆಗಳನ್ನು ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಮಾಡಿಕೊಂಡಿ ದ್ದರು.
Kannada Bible (KNCL) BSI 2016
ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೇಟೆಗೆ ಹೋಗಿ ಬಂದರೆ ಅವರು ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ. ಮಾತ್ರವಲ್ಲದೆ ಲೋಟ, ಚೆಂಬು ಮತ್ತು ತಪ್ಪಲೆಗಳನ್ನು ಬೆಳಗಿ ತೊಳೆಯುವುದು ಮುಂತಾದ ಅನೇಕ ಶುದ್ಧಾಚಾರಗಳನ್ನು ಅವರು ಪಾಲಿಸುತ್ತಿದ್ದರು.