Matthew 12:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಮರ ಒಳ್ಳೆಯದಾದರೆ ಅದರ ಫಲವು ಒಳ್ಳೆಯದೆನ್ನಿರಿ. ಮರ ಕೆಟ್ಟದಾದರೆ ಅದರ ಫಲವು ಕೆಟ್ಟದು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವುದು.
Kannada BSI Bible 2016
ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮರ ಒಳ್ಳೇದಂದರೆ ಅದರ ಫಲವೂ ಒಳ್ಳೇದನ್ನಿರಿ. ಮರ ಹುಳುಕು ಅಂದರೆ ಅದರ ಫಲವೂ ಹುಳುಕು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವದು.
Kannada Bible (KNCL) BSI 2016
“ಒಳ್ಳೆಯ ಹಣ್ಣು ಬೇಕಾದರೆ ಮರ ಒಳ್ಳೆಯದಿರಬೇಕು. ಹುಳುಕು ಮರವಾದರೆ ಸಿಗುವುದು ಹುಳುಕು ಹಣ್ಣೇ. ಹಣ್ಣಿನ ರುಚಿಯಿಂದ ಮರವನ್ನು ಗುರುತಿಸಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮರವು ಒಳ್ಳೆಯದಾಗಿದ್ದರೆ, ಅದರ ಫಲವು ಒಳ್ಳೆಯದಾಗಿರುವುದು; ಮರವು ಕೆಟ್ಟದ್ದಾಗಿದ್ದರೆ, ಅದರ ಫಲವು ಕೆಟ್ಟದ್ದಾಗಿರುವುದು. ಏಕೆಂದರೆ ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು.