Matthew 13:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.
Kannada BSI Bible 2016
ಆಗ ಜನರ ದೊಡ್ಡ ಸಮೂಹಗಳು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ದೋಣಿ ಯನ್ನು ಹತ್ತಿ ಕೂತುಕೊಂಡನು. ಮತ್ತು ಆ ಸಮೂಹ ದವರೆಲ್ಲಾ ದಡದ ಮೇಲೆ ನಿಂತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಹಳ ಜನರು ಆತನ ಬಳಿಗೆ ಕೂಡಿಬಂದದರಿಂದ ಆತನು ದೋಣಿ ಹತ್ತಿ ಕೂತುಕೊಂಡನು. ಆ ಜನರೆಲ್ಲರು ದಡದಲ್ಲಿ ನಿಂತಿದ್ದರು.
Kannada Bible (KNCL) BSI 2016
ಜನರು ತಂಡೋಪತಂಡವಾಗಿ ಕೂಡಿಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು.