Matthew 15:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇವು ಮನುಷ್ಯನನ್ನು ಅಶುದ್ಧನನ್ನಾಗಿ ಮಾಡುತ್ತವೆ. ಆದರೆ ಊಟಕ್ಕೆ ಮೊದಲು ಕೈತೊಳೆಯದ ಮಾತ್ರಕ್ಕೆ ಮನುಷ್ಯನೇನೂ ಅಶುದ್ಧನಾಗುವುದಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಂಥವುಗಳೇ ಮನುಷ್ಯನನ್ನು ಅಶುದ್ಧಿಗೊಳಿಸುತ್ತವೆ. ಆದರೆ ಕೈ ತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ” ಅಂದನು.
Kannada BSI Bible 2016
ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮನುಷ್ಯನನ್ನು ಕೆಡಿಸುವಂಥವುಗಳು ಇವೇ; ಆದರೆ ಕೈತೊಳಕೊಳ್ಳದೆ ಊಟಮಾಡುವದು ಮನುಷ್ಯನನ್ನು ಕೆಡಿಸುವದಿಲ್ಲ ಅಂದನು.
Kannada Bible (KNCL) BSI 2016
ಮನುಷ್ಯನನ್ನು ಕಲುಷಿತಗೊಳಿಸುವಂಥವು ಇವೇ. ಕೈ ತೊಳೆಯದೆ ಊಟಮಾಡುವುದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವುಗಳೇ ಮನುಷ್ಯನನ್ನು ಅಶುದ್ಧ ಮಾಡುತ್ತವೆ; ಆದರೆ ಕೈತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ,” ಎಂದರು.