Matthew 17:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಪ್ರಭುವೇ, ನನ್ನ ಮಗನಿಗೆ ದಯೆತೋರು. ಅವನು ಮೂರ್ಛಾರೋಗದಿಂದ ಬಹಳ ಬಾಧೆಪಡುತ್ತಿದ್ದಾನೆ. ಅವನು ಆಗಾಗ್ಗೆ ಬೆಂಕಿಯಲ್ಲಿ ಇಲ್ಲವೇ ನೀರಿನಲ್ಲಿ ಬೀಳುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ.
Kannada BSI Bible 2016
ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು; ಯಾಕಂದರೆ ಅವನು ಚಂದ್ರರೋಗ ದಿಂದ ಬಹಳವಾಗಿ ಕಷ್ಟಪಡುತ್ತಾನೆ, ಅನೇಕಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ವಾಮೀ, ನನ್ನ ಮಗನನ್ನು ಕರುಣಿಸು; ಅವನು ಮೂರ್ಛಾರೋಗದಿಂದ ಬಹಳ ಕಷ್ಟಪಡುತ್ತಾನೆ; ಆಗಾಗ್ಗೆ ಬೆಂಕಿಯಲ್ಲಿಯೂ ಆಗಾಗ್ಗೆ ನೀರಿನಲ್ಲಿಯೂ ಬೀಳುತ್ತಿರುವನು.
Kannada Bible (KNCL) BSI 2016
“ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದುಬಿಡುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು. ಏಕೆಂದರೆ ಅವನು ಮೂರ್ಛಾರೋಗದಿಂದ ಬಹಳವಾಗಿ ಕಷ್ಟಪಡುತ್ತಾನೆ. ಅನೇಕ ಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ.