Matthew 17:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ದೇವಾಲಯಕ್ಕೆ ಯೆಹೂದ್ಯರಿಂದ ವಾರ್ಷಿಕ ತೆರಿಗೆ ವಸೂಲಿ ಮಾಡುವ ಕೆಲವರು ಪೇತ್ರನ ಬಳಿಗೆ ಬಂದು, “ನಿಮ್ಮ ಬೋಧಕನು ದೇವಾಲಯದ ವಾರ್ಷಿಕ ತೆರಿಗೆಯನ್ನು ಸಲ್ಲಿಸುವುದಿಲ್ಲವೋ?” ಎಂದು ಕೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಕಪೆರ್ನೌಮಿಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು ಸಂಗ್ರಹಿಸುವವರು ಪೇತ್ರನ ಬಳಿಗೆ ಬಂದು, “ನಿಮ್ಮ ಗುರುವು ದೇವಾಲಯದ ತೆರಿಗೆಯನ್ನು ಕಟ್ಟುವುದಿಲ್ಲವೇ” ಎಂದು ಕೇಳಲು, “ಹೌದು ಕಟ್ಟುವನು” ಅಂದನು.
Kannada BSI Bible 2016
ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಕಪೆರ್ನೌವಿುಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು ಎತ್ತುವವರು ಪೇತ್ರನ ಬಳಿಗೆ ಬಂದು - ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವದಿಲ್ಲವೇ ಎಂದು ಕೇಳಲು - ಹೌದು, ಸಲ್ಲಿಸುವನು ಅಂದನು.
Kannada Bible (KNCL) BSI 2016
ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, “ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?” ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, “ಹೌದು, ಕಟ್ಟುತ್ತಾರೆ,” ಎಂದು ಉತ್ತರವಿತ್ತನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ಯೇಸು ಕಪೆರ್ನೌಮಿಗೆ ಬಂದಾಗ, ದೇವಾಲಯದ ತೆರಿಗೆಗಾಗಿ ಎರಡು ಬೆಳ್ಳಿ ನಾಣ್ಯಗಳನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದರು. ಅವರು ಪೇತ್ರನಿಗೆ, “ನಿಮ್ಮ ಬೋಧಕನು ತೆರಿಗೆ ಕಟ್ಟುವುದಿಲ್ಲವೋ?” ಎಂದು ಕೇಳಿದರು.